ಜೈಪುರ: ದೇಶದ ಮೊತ್ತ ಮೊದಲ ಜಾಗತಿಕ ಭಯೋತ್ಪಾದನಾ ವಿರೋಧಿ ಮತ್ತು ಬಂಡಾಯ ವಿರೋಧಿ ಸೆಂಟರ್ನ್ನು ಜೈಪುರದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ರಾಜಸ್ಥಾನದ ಗೃಹಸಚಿವಾಲಯ 50 ಎಕರೆ ಭೂಮಿಯನ್ನು ಗೊತ್ತು ಮಾಡಿದೆ.
ಜೈಪುರ ಜಿಲ್ಲೆಯ ಬಗ್ರು ನಗರದಲ್ಲಿ ಬರೋಬ್ಬರಿ ರೂ.275 ಕೋಟಿ ವೆಚ್ಚದಲ್ಲಿ ಈ ಸೆಂಟರ್ ಸ್ಥಾಪನೆಯಾಗಲಿದೆ. ಒಟ್ಟು ಮೊತ್ತದಲ್ಲಿ ರಾಜ್ಯ ಸರ್ಕಾರ 110 ಕೋಟಿ ನೀಡಿದರೆ, ಕೇಂದ್ರ 165 ಕೋಟಿ ರೂಪಾಯಿ ಒದಗಿಸಲಿದೆ.
ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು 2018ರ ಬಜೆಟ್ನಲ್ಲಿ ಸರ್ದಾರ್ ಪಟೇಲ್ ಗ್ಲೋಬಲ್ ಸೆಂಟರ್ ಫಾರ್ ಸೆಕ್ಯೂರಿಟಿ, ಕೌಂಟರ್ ಟೆರರಿಸಂ, ಯ್ಯಾಂಟಿ ಇನ್ಸರ್ಜೆನ್ಸಿ ಘೋಷಿಸಿದ್ದರು. ಅದರನ್ವಯ ಗ್ಲೋಬಲ್ ಕೌಂಟರ್ ಟೆರರಿಸಂ ಆಂಡ್ ಯ್ಯಾಂಟಿ ಇನ್ಸರ್ಜೆನ್ಸಿ ಸೆಂಟರ್ ಸ್ಥಾಪನೆಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.