ಮಥುರಾ: ಮಥುರಾ ಮತ್ತು ವೃಂದಾವನಗಳಿಗೆ ಬರುವ ಅಪಾರ ಪ್ರಮಾಣದ ಹೂಗಳನ್ನು ವಿಧವೆಯ ಆಶ್ರಮಗಳಿಗೆ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಈ ಹೂಗಳಿಂದ ವಿಧವೆಯವರು ಅಗರ್ಬತ್ತಿ, ಸುಗಂಧದ್ರವ್ಯಗಳನ್ನು ತಯಾರಿಸಿದರೆ ಅವರು ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ನೀಡಿದೆ.
ಅಲ್ಲದೇ ಹೆಚ್ಚುವರಿಯಾದ, ತ್ಯಾಜ್ಯವಾದ ಹೂಗಳನ್ನು ಯಮುನಾ ನದಿಗೆ ಬಿಸಾಕುವ ಬದಲು ಇಂತಹ ಕಾರ್ಯಗಳಿಗೆ ಬಳಸಿದರೆ ನದಿಯ ಸ್ವಚ್ಛತೆಯನ್ನೂ ಕಾಪಾಡಲು ಸಹಕಾರಿಯಾಗುತ್ತದೆ. ವಿಧವೆಯರಿಗೆ ಉದ್ಯೋಗ ದೊರೆಯುತ್ತದೆ.
ಅಲ್ಲದೇ ಎರಡು ನಗರಗಳಲ್ಲಿನ ವಿಧವೆಯರ ಆಶ್ರಮಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅರಿತುಕೊಳ್ಳುವಂತೆ ಸುಪ್ರೀಂ ಯುಪಿ ಸರ್ಕಾರಕ್ಕೆ ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.