ನವದೆಹಲಿ: ಎನ್ಸಿಸಿ ಮತ್ತು ಅದರ ತರಬೇತಿ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಇತ್ತೀಚಿಗೆ ಹೇಳಿಕೆ ನೀಡಿರುವ ಎಸಿಸಿಐ ಅಧ್ಯಕ್ಷ ರಾಹುಲ್ ಗಾಂಧೀ ಅವರಿಗೆ ಎನ್ಸಿಸಿ ಕೆಡೆಟ್ ಒಬ್ಬರು ಸಲಹೆಯೊಂದನ್ನು ನೀಡಿದ್ದಾರೆ.
ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರುಗಳು ಎನ್ಸಿಸಿ ಬಗ್ಗೆ ತಿಳಿದುಕೊಳ್ಳಬೇಕು ಎಂದಿರುವ ಕೆಡೆಟ್ ಸಂಜನಾ ಸಿಂಗ್, ‘1965ಮತ್ತು 1971ರ ಯುದ್ಧಗಳಲ್ಲಿ ಎನ್ಸಿಸಿ(ನ್ಯಾಷನಲ್ ಕೆಡೆಟ್ ಕಾರ್ಪ್ಸ್) ರಕ್ಷಣೆಯ ಎರಡನೇ ಅಂಗವಾಗಿತ್ತು ಎಂದಿದ್ದಾರೆ.
ಮೈಸೂರಿನ ಮಹರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ರಾಹುಲ್ಗೆ ವಿದ್ಯಾರ್ಥಿನಿಯೊಬ್ಬಳು ಎನ್ಸಿಸಿ ಬಗೆಗಿನ ಪ್ರಶ್ನೆ ಕೇಳಿದ್ದಳು. ಇದಕ್ಕೆ ಉತ್ತರಿಸಿದ ರಾಹುಲ್, ‘ಎನ್ಸಿಸಿ ತರಬೇತಿ ಬಗ್ಗೆ ನನಗೆ ಅರಿವಿಲ್ಲ. ಹೀಗಾಗೀ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ’ ಎಂದಿದ್ದರು.