ಬೆಂಗಳೂರು: ಬೆಂಗಳೂರು ನಗರ ಏಷ್ಯಾದಲ್ಲೇ ಜೀವನ ನಿರ್ವಹಣೆಗೆ ಅತ್ಯಂತ ಅಗ್ಗದ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ. ಸಿಂಗಾಪುರ ಅತ್ಯಂತ ದುಬಾರಿ ನಗರವಾಗಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
ಎಕನಾಮಿಕ್ ಇಂಟೆಲಿಜೆನ್ಸ್ ಯುನಿಟ್ ನಡೆಸಿರುವ ಜೀವನ ವೆಚ್ಚ ಸಮೀಕ್ಷೆ 2018ರ ಪ್ರಕಾರ, ಜೀವನ ವೆಚ್ಚದ ಪಟ್ಟಿಯಲ್ಲಿ 133 ದೇಶಗಳ ಪೈಕಿ ಬೆಂಗಳೂರು 129ನೇ ಸ್ಥಾನ ಪಡೆದುಕೊಂಡಿದೆ. ಅತ್ಯಂತ ದುಬಾರಿ ನಗರ ಸಿಂಗಾಪುರ ಮೊದಲ ಸ್ಥಾನದಲ್ಲಿದೆ.
150 ಉತ್ಪನ್ನ ಮತ್ತು ಸೇವೆಗಳ 400 ವೈಯಕ್ತಿಕ ದರಗಳನ್ನು ಹೋಲಿಕೆ ಮಾಡಿ ಈ ಸಮೀಕ್ಷೆ ನಡೆಸಲಾಗಿದೆ. ಚೆನ್ನೈ ಮತ್ತು ನವದೆಹಲಿ ಕೂಡ ಟಾಪ್ 10 ಅಗ್ಗದ ನಗರಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಡಮಾಸ್ಕಸ್ ಮತ್ತು ಕ್ಯಾರಕಾಸ್ ವಿಶ್ವದ ಅತೀ ಅಗ್ಗದ ನಗರವಾಗಿದೆ. ಇದಕ್ಕೆ ಅಲ್ಲಿನ ರಾಜಕೀಯ ಪರಿಸ್ಥಿತಿಗಳು ಕಾರಣವಾಗಿವೆ. ಬೆಂಗಳೂರು ಸೇರಿದಂತೆ ಇತರ ಏಷ್ಯಾದ ನಗರಗಳು ರಚನಾತ್ಮಕವಾಗಿ ಅಗ್ಗವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.