ನವದೆಹಲಿ: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ರೂ.492.83 ಕೋಟಿ ಮೊತ್ತ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ.
ಬೆಂಗಳೂರು ಕಾಂಟನ್ಮೆಂಟ್ನಿಂದ ವೈಟ್ಫೀಲ್ಡ್ವರೆಗೆ ಎರಡು ಹೆಚ್ಚುವರಿ ಮಾರ್ಗಗಳನ್ನು ನಾಲ್ಕು ಹಂತಗಳ ಯೋಜನೆಯೊಂದಿಗೆ ರೂ.492.83 ಕೋಟಿ ವೆಚ್ಚದಲ್ಲಿ ಜಾರಿಗೆ ತರಲು ರೈಲ್ವೇ ಸಮ್ಮತಿ ನೀಡಿದೆ ಎಂದು ಟ್ವಿಟರ್ನಲ್ಲಿ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
25 ಕಿಲೋ ಮೀಟರ್ಗಳ ಈ ಮಾರ್ಗ ಬೆಂಗಳೂರು ಕಾಂಟನ್ಮೆಂಟ್, ಬೆಂಗಳೂರು ಈಸ್ಟ್, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ, ವೈಟ್ಫೀಲ್ಡ್ ಎಂಬ 6 ಪ್ರಮುಖ ರೈಲ್ವೇ ಸ್ಟೇಶನ್ಗಳನ್ನು ಒಳಗೊಳ್ಳಲಿದೆ.
ಈ ಯೋಜನೆಯಿಂದ ಪ್ರತಿನಿತ್ಯ 60,000 ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಲಿದೆ.