ನವದೆಹಲಿ: ಮಧ್ಯ ಭಾರತದ ಅರಣ್ಯ ಪ್ರದೇಶಗಳ ಜನರಿಗೆ ತಮ್ಮ ಮಾತೃಭಾಷೆಯಾಗಿರುವ ಗೋಂಡಿ ಭಾಷೆಯ ಗುರುತನ್ನು ಪುನಃಸ್ಥಾಪಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಾಯಹಸ್ತ ಚಾಚಿದೆ.
ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ಗಢ, ಆಂಧ್ರಪ್ರದೇಶದ ಸುಮಾರು 1 ಕೋಟಿ ಜನರು ಗೋಂಡಿ ಭಾಷೆಯನ್ನು ಮಾತನಾಡುತ್ತಾರೆ. ವರ್ಷ ಕಳೆದಂತೆ ಈ ಭಾಷೆ ಇತರ ಪ್ರಾದೇಶಿಕ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ತನವನ್ನು ಕಳೆದುಕೊಂಡಿದೆ. ಇದರಿಂದ ಮೂಲ ಗೋಂಡಿ ಭಾಷೆ ಕಣ್ಮರೆಯಾಗುವ ಹಂತದಲ್ಲಿದೆ.
ಇದೀಗ ಕೇಂದ್ರ ಸಂಸ್ಕೃತಿ ಸಚಿವಾಲಯ 3,500 ಗೋಂಡಿ ಶಬ್ದಗಳ ಅರ್ಥ ತಿಳಿಸುವ ಡಿಕ್ಷನರಿಯನ್ನು ಹೊರ ತಂದಿದೆ. ಈ ಭಾಷೆಗೆ ಟೈಪ್ಸ್ಪೇಸ್ ಸೃಷ್ಟಿಸುವ ಮತ್ತು ಆಪ್ ಕ್ರಿಯೇಟ್ ಮಾಡುವ ಮಹತ್ವಾಕಾಂಕ್ಷೆಯನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.