ನವದೆಹಲಿ: ಮಾ.24ರಂದು ದೇಶದಲ್ಲಿ ಅರ್ಥ್ ಅವರ್ನ್ನು ಆಚರಿಸಲಾಗುತ್ತಿದ್ದು, ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವಂತೆ ಕೇಂದ್ರ ಸಚಿವ ಡಾ.ಹರ್ಷವರ್ಧನ್ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಿವ್ ಅಪ್ ಟು ಗೀವ್ ಬ್ಯಾಕ್ ಮತ್ತು ಕನೆಕ್ಟ್ ಟು ಅರ್ಥ್ ಥೀಮ್ನೊಂದಿಗೆ ಅಥ್ ಅವರ್ನ್ನು ಆಚರಣೆ ಮಾಡಲಾಗುತ್ತಿದೆ.
ಅರ್ಥ್ ಅವರ್ ಎಂಬುದು ಹವಮಾನ ವೈಪರೀತ್ಯದ ವಿರುದ್ಧದ ವಿಶ್ವದ ಅತೀದೊಡ್ಡ ತಳಮಟ್ಟದ ಚಳುವಳಿಯಾಗಿದೆ. ವಿಶ್ವದ ಜನರೆಲ್ಲ ಒಂದಾಗಿ ಅನವಶ್ಯಕ ವಿದ್ಯುತ್ ದೀಪಗಳನ್ನು ಆರಿಸುತ್ತಾರೆ. 178 ದೇಶಗಳು ಇದರಲ್ಲಿ ಕೈಜೋಡಿಸುತ್ತವೆ.