Friday, March 23rd, 2018
ಅಂತಾರಾಷ್ಟ್ರೀಯ Admin
ವಾಷಿಂಗ್ಟನ್: ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಆರಂಭಗೊಂಡಿದೆ. ವಿಶ್ವದ ಈ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರರ ಮೇಲೆ ಸುಂಕಗಳನ್ನು ವಿಧಿಸಿದೆ.
ಅಮೆರಿಕಾ ಫಸ್ಟ್ ಟ್ರೇಡ್ ಪಾಲಿಸಿಯನ್ವಯ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಯಸಮ್ಮತವಲ್ಲದ ಬವದ್ಧಿಕ ಆಸ್ತಿ ಕಳ್ಳತನ ಆರೋಪ ಹೊರಿಸಿ ಗುರುವಾರ ಚೀನಾ ವಸ್ತುಗಳ ಮೇಲೆ 50 ಬಿಲಿಯನ್ ಡಾಲರ್ ಸುಂಕಗಳನ್ನು ವಿಧಿಸಿದ್ದಾರೆ.
ಟ್ರಂಪ್ ಧೋರಣೆಯಿಂದ ಕುಪಿತಗೊಂಡ ಚೀನಾ ತಕ್ಷಣವೇ ತನ್ನ ದೇಶದಲ್ಲಿನ ಅಮೆರಿಕಾದ ಪೋರ್ಕ್, ಅಲ್ಯೂಮೀನಿಯಂ ಮುಂತಾದ ವಸ್ತುಗಳಿಗೆ ಸುಂಕ ವಿಧಿಸಿದೆ.
ಸುಂಕದ ಹೊರತಾಗಿ ಅಮೆರಿಕಾ ಚೀನಾದ ಮೇಲೆ ಹೊಸ ಹೂಡಿಕೆ ನಿರ್ಬಂಧ ಹೇರಲು ಮತ್ತು ವರ್ಲ್ಡ್ ಟ್ರೇಡ್ ಅರ್ಗನೈಝೇಶನ್ನಲ್ಲಿ ಅದರ ವಿರುದ್ಧ ಕ್ರಮಕೈಗೊಳ್ಳಲು ನಿರ್ಧರಿಸಿದೆ.