ನೆಲಕ್ಕೆ ಬಿದ್ದಿರುವ ಎಲೆಗಳನ್ನು ರಾಶಿ ಹಾಕಿ ಸುಡುವವರೇ ಹೆಚ್ಚು. ಇದರಿಂದ ಉಂಟಾಗುವ ವಾಯುಮಾಲಿನ್ಯದತ್ತ ಯಾರೂ ಗಮನ ನೀಡುವುದಿಲ್ಲ. ಆದರೆ ಪುಣೆಯ ಮಹಿಳೆಯೊಬ್ಬರು ಒಣ ಎಲೆಗಳನ್ನು ಸಂಗ್ರಹಿಸಿ ಅವುಗಳಿಂದ ಕಾಂಪೋಸ್ಟ್ ಗೊಬ್ಬರಗಳನ್ನು ತಯಾರಿಸುತ್ತಿದ್ದಾರೆ. ಈ ಮೂಲಕ ವಾಯುಮಾಲಿನ್ಯ ಆಗುವುದನ್ನು ತಪ್ಪಿಸುತ್ತಿದ್ದಾರೆ ಮತ್ತು ಗಿಡ ಮರಗಳಿಗೆ, ರೈತರಿಗೆ ಪ್ರಯೋಜಕಾರಿಯಾದ ಗೊಬ್ಬರಗಳನ್ನು ತಯಾರಿಸುತ್ತಿದ್ದಾರೆ.
ಅದಿತಿ ದಿಯೋಧರ್ ಎಂಬುವವರು ಇದುವರೆಗೆ 5 ಸಾವಿರಕ್ಕೂ ಅಧಿಕ ಗೋಣಿ ಒಣ ಎಲೆಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಅವುಗಳನ್ನು ಒಂದೆಡೆ ರಾಶಿ ಹಾಕಿ, ಅವುಗಳಿಗೆ ನೀರು ಹಾಕಿ ಹಸಿಯಾಗುವಂತೆ ಮಾಡಿ ಕೊಳೆಸಿದ್ದಾರೆ. ಬಳಿಕ ಅದರಿಂದ ಕಾಪೋಸ್ಟ್ ಗೊಬ್ಬರ ಮಾಡಿದ್ದಾರೆ. ಅದನ್ನು ಗಿಡ ಮರಗಳಿಗಾಗಿ, ಬೆಳಗಳಿಗೆ ಹಾಕಲು ಜನ ಇವರಿಂದ ತೆಗೆದುಕೊಂಡು ಹೋಗುತ್ತಾರೆ.
ತನ್ನ ಈ ಕಾರ್ಯಕ್ಕಾಗಿಯೇ ವರು ‘ಬ್ರೌನ್ ಲೀಫ್’ ಎಂಬ ಫೋರಂ ಒಂದನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿರುವ ಸದಸ್ಯರೆಲ್ಲಾ ಪುಣೆಯಲ್ಲಿ ಎಲೆಗಳನ್ನು ಯಾರೂ ಸುಡದಂತೆ ನೋಡಿಕೊಳ್ಳುತ್ತಾರೆ. ಅಲ್ಲದೇ ಆ ಎಲೆಗಳನ್ನು ಸಂಗ್ರಹಿಸಿ ತಂದು ಗೊಬ್ಬರ ಮಾಡುತ್ತಾರೆ. ಎಲೆಗಳ ಸಂಗ್ರಹ, ಗೊಬ್ಬರ ತೆಗೆದುಕೊಳ್ಳುವುದು ಈ ಯಾವುದು ಕೂಡ ಹಣವನ್ನು ಒಳಗೊಂಡಿಲ್ಲ.
ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದೇ ಇಲ್ಲ, ಎಲ್ಲವೂ ಬಳಕೆಗೆ ಒಂದಲ್ಲ ಒಂದು ರೀತಿಯಲ್ಲಿ ಯೋಗ್ಯವಾದುದೇ ಇರುವುದು ಎಂಬುದು ಅದಿತಿ ಅವರ ನಿಲುವು.