ನವದೆಹಲಿ: ಭಾರತದ ಮೂರು ಸೇನಾ ಪಡೆಗಳನ್ನು ಏಕೀಕೃತಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಮೂರು ಕಮಾಂಡರ್ಗಳಡಿ ಕಾರ್ಯನಿರ್ವಹಿಸುತ್ತಿದೆ. ಈ ಕಮಾಂಡ್ ರೂಲ್ಸ್ಗೆ ತಿದ್ದುಪಡಿಯನ್ನು ತರಲು ಸರ್ಕಾರ ಬಯಸಿದೆ ಎನ್ನಲಾಗಿದೆ.
ಇದರ ಪ್ರಕಾರ ಮೂರರ ಪೈಕಿ ಯಾವುದಾದರು ಪಡೆಯ ಅಧಿಕಾರಿ ಮೂರು ಸೇನೆಯ ನೇರ ಕಮಾಂಡರ್ಶಿಪ್ನ್ನು ಪಡೆದುಕೊಳ್ಳುತ್ತಾರೆ. ಇದರ ಸಾಧಕ ಬಾಧಕಗಳ ಬಗ್ಗೆ ತಜ್ಞರೊಂದಿಗೆ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಸೇನೆಯ ಏಕೀಕರಣ ಆಧುನಿಕ ಕಾಲದ ಅಗತ್ಯ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.