ಗಯಾ: ಬಿಹಾರ ಗಯಾದ ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಿಂದ ರಾಮ ನವಮಿಯ ಸಂದರ್ಭಗಳಲ್ಲಿ ಹನುಮಂತನ ಬಾವುಟಗಳನ್ನು ಹೊಲಿಯುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ರಾಮ ನವಮಿಗಾಗಿ ಕಾಯುವ ಮೊಹಮ್ಮದ್ ಸಲೀಂ, ಹನುಮಂತನ ಹಿಂದೂ ಭಕ್ತರು ಬಳಸುವ ಬಾವುಟಗಳನ್ನು ಹೊಲಿಯುತ್ತಾರೆ. ಈ ಹಬ್ಬದ ವೇಳೆ ಇವರ ಆದಾಯ ದ್ವಿಗುಣಗೊಳ್ಳುತ್ತದೆ.
ಹಿಂದೂ-ಮುಸ್ಲಿಂ ಭಾವಕೈತೆಗೆ ಸಲೀಂ ಅವರ ಈ ಕಾರ್ಯ ಉತ್ತಮ ಉದಾಹರಣೆಯಾಗಿದೆ.
ವಿಷ್ಣು ಶ್ರೀರಾಮನ ಅವತಾರವೆತ್ತಿ ಭೂಮಿಯಲ್ಲಿ ಜನನವಾಗುವ ದಿನವನ್ನು ರಾಮನವಮಿಯೆಂದು ಆಚರಿಸಲಾಗುತ್ತದೆ. 9 ದಿನಗಳ ಚೈತ್ರ ನವರಾತ್ರಿಯ ಸಂಭ್ರಮದ ಕೊನೆಯ ದಿನವೂ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.