ನವದೆಹಲಿ: ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ವಿಕಲಚೇತನರಿಗೆ ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದಾಖಲಾತಿ ನಿಯಮಗಳಿಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ನೀಡಿವೆ.
ವಿಲಕಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅನ್ವಯ ವೈದ್ಯಕೀಯ ಉನ್ನತ ಶಿಕ್ಷಣಗಳಲ್ಲಿ ವಿಕಲಚೇತನರ ಮೀಸಲಾತಿ ಶೇ.3ರಿಂದ ಶೇ.5ಕ್ಕೆ ಏರಿಕೆಯಾಗಲಿದೆ.
’20 ವರ್ಷಗಳ ಬಳಿಕ ಸರ್ಕಾರವೂ ಪ್ರಧಾನಿಗಳ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ದೃಷ್ಟಿಕೋನದಂತೆ ದಿವ್ಯಾಂಗರ ಉನ್ನತಿಗಾಗಿ ಐತಿಹಾಸಿಕ ತೀರ್ಮಾಣವನ್ನು ತೆಗೆದುಕೊಂಡಿದೆ’ ಎಂದು ಆರೋಗ್ಯ ಸಚಿವ ಜೆ.ಪಿ ನಡ್ಡಾ ತಿಳಿಸಿದ್ದಾರೆ.
ದೃಷ್ಟಿ ಹೀನತೆ, ಮಂದ ದೃಷ್ಟಿ, ಕಿವುಡು, ಕುಷ್ಠ ರೋಗ ಗುಣಮುಖನಾದ ವ್ಯಕ್ತಿ, ಆಟಿಸಂ ಮುಂತಾದ 21 ದೈಹಿಕ ಸಮಸ್ಯೆ ಹೊಂದಿದ ವ್ಯಕ್ತಿಗಳು ಮೀಸಲಾತಿಯನ್ನು ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.