ಹೈದರಾಬಾದ್: ಮುತ್ತಿನ ನಗರಿ ಎಂದು ಕರೆಯಲ್ಪಡುವ ಹೈದರಾಬಾದ್ ಸತತ ನಾಲ್ಕನೇ ಬಾರಿಗೆ ಜೀವನ ನಡೆಸಲು ಅತ್ಯುತ್ತಮ ನಗರ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದರರೊಂದಿಗೆ ಪುಣೆ ನಗರ ಕೂಡ ಜೀವನ ನಡೆಸಲು ಅತ್ಯಂತ ಉತ್ತಮ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದೆ.
ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ರೇಟಿಂಗ್ 2018 ಮಂಗಳವಾರ ಬಿಡುಗಡೆಗೊಂಡಿದ್ದು, ಇದರನ್ವಯ ಹೈದರಾಬಾದ್ ಮತ್ತು ಪುಣೆ ಜೀವನ ನಡೆಸಲು ಅತ್ಯುತ್ತಮ ನಗರಗಳು. ಕಳೆದ 4 ವರ್ಷಗಳಿಂದಲೂ ಈ ಖ್ಯಾತಿಯನ್ನು ಹೈದರಾಬಾದ್ ಪಡೆಯುತ್ತಲೇ ಬಂದಿದೆ. ಉತ್ತಮ ಹವಾಮಾನ, ಕಡಿಮೆ ಅಪರಾಧ ಪ್ರಕರಣಗಳನ್ನು ಈ ನಗರ ಹೊಂದಿದೆ. ಕಳೆದ ಎರಡು ವರ್ಷದಿಂದ ಪುಣೆ ಕೂಡ ತನ್ನ ರ್ಯಾಂಕಿಂಗ್ನ್ನು ಉತ್ತಮಪಡಿಸಿಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ ಇದಕ್ಕೆ ಕಾರಣವಾಗಿದೆ. ಬೆಂಗಳೂರು, ಮುಂಬಯಿ, ಚೆನ್ನೈ, ಕೋಲ್ಕತ್ತಾ ಕೂಡ ಕಳಪೆ ಸಾಧನೆ ಮಾಡಿವೆ.