ನವದೆಹಲಿ: ರೈಲ್ವೇಯ ಫೀಲ್ಡ್ ಆಫೀಸರ್ಗಳಿಗೆ ಮತ್ತು ಸಿಬ್ಬಂದಿಗಳಿಗೆ ತಾವು ಮಾಡಿದ ಉತ್ತಮ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಅವಕಾಶವನ್ನು ರೈಲ್ವೇಯ ರೈಲ್ ಗುಡ್ ವರ್ಕ್ ಪೋರ್ಟಲ್ ನೀಡಿದೆ.
ತಮ್ಮ ತಮ್ಮ ವಲಯದಲ್ಲಿ ರೈಲ್ವೇ ಸಿಬ್ಬಂದಿಗಳು ಮಾಡುವ ಉತ್ತಮ ಕಾರ್ಯವನ್ನು ನಿರ್ಭೀತಿಯಿಂದ ಹಂಚಿಕೊಳ್ಳಲು ಈ ಪೋರ್ಟಲ್ ಅವರಿಗೆ ಉತ್ತೇಜನವನ್ನು ನೀಡಿದೆ.
ರೈಲ್ವೇ ಗುಡ್ ವರ್ಕ್ ಪೋರ್ಟಲ್ ಆರಂಭಗೊಂಡ ಫೆಬ್ರವರಿಯಿಂದ ಇದುವರೆಗೆ ತಾವು ಮಾಡಿದ ಸುಮಾರು 600 ಉತ್ತಮ ಕಾರ್ಯಗಳನ್ನು ರೈಲ್ವೇ ಉದ್ಯೋಗಿಗಳು ಹಂಚಿಕೊಂಡಿದ್ದಾರೆ.
ಮಾಡಿರುವ ಕಾರ್ಯದ ಫೋಟೋಗಳು, ವಿವರಣೆ, ಉದ್ಯೋಗಿಯ ಹೆಸರು, ಐಡಿ, ಫೋನ್ನಂಬರ್ಗಳು ಇಲ್ಲಿ ಅಪ್ಲೋಡ್ ಆಗುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.