ನವದೆಹಲಿ: ಜಿಎಸ್ಟಿ ಜಾರಿಗೂ ಮುನ್ನ ಪ್ಯಾಕ್ ಆದ ಉತ್ಪನ್ನಗಳನ್ನು ಮಾರಾಟ ಮಾಡುವ ಡೆಡ್ಲೈನ್ ಮಾ.೩೧ 31 ಆಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಜುಲೈ೧ರಿಂದ ಜಿಎಸ್ಟಿ ಅನ್ವಯವಾದ ಬಳಿಕ ಎಂಆರ್ಪಿ ಸ್ಟಿಕ್ಕರ್ವುಳ್ಳ ವಸ್ತುಗಳನ್ನು ಮಾರಾಟ ಮಾಡಲು ಕಂಪನಿಗಳಿಗೆ ಸೆಪ್ಟಂಬರ್ವರೆಗೆ ಅವಕಾಶ ನೀಡಲಾಯಿತು. ಬಳಿಕ ಅದನ್ನು ಮಾ.31ರವರೆಗೆ ವಿಸ್ತರಣೆ ಮಾಡಲಾಯಿvತು.
ಇದೀಗ ಸ್ಪಷ್ಟನೆ ನೀಡಿರುವ ಸಚಿವ, ಡೆಡ್ಲೈನ್ ವಿಸ್ತರಣೆ ಇನ್ನು ಇಲ್ಲ. ಮುಂದಿನ ತಿಂಗಳಿನಿಂದ ಎಂಆರ್ಪಿ ವಸ್ತುಗಳ ಮಾರಾಟ ಇಲ್ಲ, ಪ್ಯಾಕೇಟ್ ಮೇಲೆ ಹೆಚ್ಚುವರಿ ಸ್ಟಿಕ್ಕರ್ ಅಂಟಿಸಲೂ ಅವಕಾಶವಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.