ಚಂಡೀಗಢ: ಮಧ್ಯಪ್ರದೇಶ, ರಾಜಸ್ಥಾನದಂತೆ ಹರಿಯಾಣವೂ 12 ವರ್ಷದೊಳಗಿನ ಅಪ್ರಾಪ್ತಿಯರನ್ನು ಅತ್ಯಾಚಾರಗೊಳಿಸುವ ಅಪರಾಧಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಗುರುವಾರ ಈ ಬಗ್ಗೆ ಅಸೆಂಬ್ಲಿಯಲ್ಲಿ ಮಸೂದೆಯನ್ನೂ ಮಂಡಿಸಿದೆ.ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯ ಕಲಂಗೆ ತಿದ್ದುಪಡಿಯನ್ನು ತರುವ ಮಸೂದೆಯನ್ನು ಮಂಡಿಸಿದೆ.
ಅಪರಾಧ ಕಾನೂನು(ಹರಿಯಾಣ ತಿದ್ದುಪಡಿ) ಮಸೂದೆ 2018ನ್ನು ಜಾರಿಗೊಳಿಸಿ, ಇದರನ್ವಯ 12 ವರ್ಷದೊಳಗಿನ ಬಾಲಕಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಿದೆ.
ಈ ಮಸೂದೆ ರಾಷ್ಟ್ರಪತಿಗಳ ಅಂಕಿತ ಪಡೆದ ಬಳಿಕವಷ್ಟೇ ಕಾನೂನಾಗಿ ಜಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.