ನವದೆಹಲಿ: ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಟ್ವಿಟರ್ನಲ್ಲಿ ಶುಭಕೋರಿದ್ದಾರೆ.
‘ವಿಶ್ವ ಗ್ರಾಹಕ ಹಕ್ಕುಗಳ ದಿನದ ಅಂಗವಾಗಿ ಶುಭಾಶಯಗಳು. ಆರ್ಥಿಕತೆಯಲ್ಲಿ ಗ್ರಾಹಕ ಮಹತ್ವದ ಪಾತ್ರ ವಹಿಸುತ್ತಾನೆ. ಭಾರತ ಸರ್ಕಾರ ಗ್ರಾಹಕರ ರಕ್ಷಣೆಯತ್ತ ಮಾತ್ರವಲ್ಲದೇ ಗ್ರಾಹಕರ ಸಮೃದ್ಧಿಯತ್ತಲೂ ಗಮನವಹಿಸುತ್ತಿದೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
ಪ್ರತಿ ವರ್ಷದ ಮಾ.15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕರ ಹಕ್ಕುಗಳ ಮತ್ತು ಅಗತ್ಯಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ.