ನವದೆಹಲಿ: ಆರೋಗ್ಯ ಮತ್ತು ಔಷಧ ವಲಯಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಇರಾನ್ ಸಹಿ ಹಾಕಿರುವ ತಿಳುವಳಿಕೆಯ ಸ್ಮರಣಿಕೆಗೆ(Memorandum of Understanding) ಪ್ರಧಾನಿ ನರೇಂದ್ರ ಮೋದಿ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ, ಇರಾನ್ ಮತ್ತು ಭಾರತದ ನಡುವೆ ಆರೋಗ್ಯ ಮತ್ತು ಔಷಧ ವಲಯದ ಸಹಕಾರಕ್ಕೆ ಏರ್ಪಟ್ಟಿರುವ ಒಪ್ಪಂದಕ್ಕೆ ಸಮ್ಮತಿ ನೀಡಲಾಗಿದೆ.
ತಿಳುವಳಿಕೆಯ ಸ್ಮರಣಿಕೆಗೆ ಫೆ.17ರಂದು ಇರಾನ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಸಹಿ ಹಾಕಲಾಗಿತ್ತು.
ಇದರಡಿ ತಜ್ಞ ವೈದ್ಯರ, ಆರೋಗ್ಯ ವೃತ್ತಿಪರರ ತರಬೇತಿ ವಿನಿಮಯ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ, ಆರೋಗ್ಯ ಸೌಲಭ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಸಹಕಾರ ಮುಂತಾದುವುಗಳು ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.