ಬೆಂಗಳೂರು: ಮಹಿಳಾ ಸುರಕ್ಷತೆಗಾಗಿ ಅತ್ಯುನ್ನತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಕೇಂದ್ರ ನಿರ್ಧರಿಸಿದ್ದು, ಕೃತಕ ಬುದ್ಧಿಮತ್ತೆಯನ್ನೊಳಗೊಂಡ ತಲಾ 10 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 8 ಮಹಾನಗರಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನಿರ್ಭಯಾ ಅನುದಾನದಿಂದ ರೂ.667 ಕೋಟಿಗಳನ್ನು ಸಿಸಿಟಿವಿ ಅಳವಡಿಸುವ ’ಸುರಕ್ಷಾ ಮಿತ್ರಾ’ ಯೋಜನೆಗಾಗಿ ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್, ಲಕ್ನೋ, ಮುಂಬಯಿ, ದೆಹಲಿ, ಕೋಲ್ಕತ್ತಾಗಳಲ್ಲಿ ಈ ಸಿಸಿಟಿವಿಗಳನ್ನು ಮಹಿಳೆಯರ ಸುರಕ್ಷತೆಗಾಗಿ ಅಳವಡಿಸಲಾಗುತ್ತದೆ.
ಕೃತಕಬುದ್ಧಿಮತ್ತೆಯುಳ್ಳ ಸಿಸಿಟಿವಿ ಇದಾಗಿದ್ದು, ದುರ್ವರ್ತನೆ ತೋರುವ ಜನರ ನಡುವಳಿಕೆಯನ್ನು ಗ್ರಹಿಸಿ ರಿಪೋರ್ಟ್ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.