ಪಶ್ಚಿಮಬಂಗಾಳ: ಪಠ್ಯವಾಗಲಿದೆ ವಿವೇಕಾನಂದರ ಚಿಕಾಗೋ ಭಾಷಣ

ಕೋಲ್ಕತ್ತಾ: ವೇದಾಂತದ ಸಿಡಿಲಮರಿ ಎಂದೇ ಖ್ಯಾತರಾಗಿರುವ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿರುವ ಐತಿಹಾಸಿಕ ಭಾಷಣ ಇನ್ನು ಮುಂದೆ ಪಶ್ಚಿಮಬಂಗಾಳ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಲಿದೆ. ‘ಸ್ವಾಮೀಜಿ ಭಾಷಣವನ್ನು ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವಾಗಿ ಸೇರ್ಪಡೆಗೊಳಿಸಲಿದ್ದೇವೆ’ ಎಂದು ಪಶ್ಚಿಮಬಂಗಾಳದ ಶಾಲಾ ಶಿಕ್ಷಣ ಮಂಡಳಿ ತಿಳಿಸಿದೆ. ಈಗಾಗಲೇ ಬಂಗಾಳ ಶಾಲೆಗಳ ಪಠ್ಯಕ್ರಮದಲ್ಲಿ ಸಿಂಗೂರ್ ಚಳುವಳಿ, ಖ್ಯಾತ ಯೋಜನೆಯಾದ ಕನ್ಯಾಶ್ರೀಯ ಬಗ್ಗೆ ಪಾಠವನ್ನು ಅಳವಡಿಸಲಾಗಿದೆ. ಇದೀಗ ಹೊಸ ಪ್ರಯತ್ನ ಎಂಬಂತೆ ವಿವೇಕಾನಂದರ ಚಿಕಾಗೋ ಭಾಷಣವನ್ನು ಅಳವಡಿಸಲಾಗುತ್ತಿದೆ.