ಬ್ರಿಟನ್: ಭಾರತ ಮೂಲದ ಸ್ಟೀಲ್ ಉದ್ಯಮಿ ಸಂಜೀವ್ ಗುಪ್ತಾ ಅವರನ್ನು ಯುಕೆಯ ಉತ್ಪಾದನಾ ಕೌಶಲ್ಯ ರಾಯಭಾರಿಯಾಗಿ ಬ್ರಿಟನ್ ಪ್ರಿನ್ಸ್ ಚಾಲ್ಸ್ ಅವರು ನೇಮಕ ಮಾಡಿದ್ದಾರೆ.
ಉತ್ಪಾದನಾ ಕೌಶಲ್ಯವನ್ನು ಉತ್ತೇಜಿಸುವ ಸಲುವಾಗಿ ವಿನ್ಯಾಸಪಡಿಸಲಾಗದ ಇಂಡಸ್ಟ್ರಿಯಲ್ ಕೆಡೆಟ್ ಪ್ರೋಗ್ರಾಂಗೆ ಗುಪ್ತಾ ರಾಯಭಾರಿಯಾಗಲಿದ್ದಾರೆ. ಶಾಲಾ ಮತ್ತು ಕಾಲೇಜು ಮಕ್ಕಳಿಗೆ, ಯುವ ಜನರಿಗೆ ಇಂಡಸ್ಟ್ರಿಯ ಬಗ್ಗೆ ನೇರ ಅನುಭವವನ್ನು ನೀಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
‘ಗುಪ್ತಾ ಅವರು ನೈಜ ಕಲ್ಪನೆಯನ್ನು ಅಳವಡಿಸುವಲ್ಲಿ, ನಾವೀಣ್ಯ ಚಿಂತನೆಯಲ್ಲಿ ಮತ್ತು ನಮ್ಮ ದೇಶದ ಬೃಹತ್ ಕೈಗಾರಿಕೆಗಳ ಸುಸ್ಥಿರ ಪುನರ್ ನಿರ್ಮಾಣದಲ್ಲಿ ಸಾಕಷ್ಟು ಕಾರ್ಯ ಮಾಡುತ್ತಿದ್ದಾರೆ, ತಮ್ಮ ಜಿಎಫ್ಸಿ ಅಲೆಯನ್ಸ್ ಮೂಲಕ ಅವರು ಇಂಡಸ್ಟ್ರಿಯಲ್ ಕೆಡೆಟ್ ಆಗಿ ಹೊರಹೊಮ್ಮಿದ್ದಾರೆ ಎಂಬುದರಿಂದ ನನಗೆ ಥ್ರಿಲ್ ಆಗಿದೆ’ ಎಂದು ಪ್ರಿನ್ಸ್ ಚಾರ್ಲ್ಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.