ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ತನ್ನ ವಾರ್ಷಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಫೋರ್ಬ್ಸ್ ನ ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಇವರು 176ನೇ ಸ್ಥಾನ ಪಡೆದಿದ್ದಾರೆ. ಜಿಂದಾಲ್ ಸ್ಟೀಲ್ ಮಾಲಕಿಯಾಗಿರುವ ಇವರ ಒಟ್ಟು ಆಸ್ತಿ ಮೌಲ್ಯ 8.8 ಬಿಲಿಯನ್ ಡಾಲರ್.
ಎರಡನೇ ಸ್ಥಾನವನ್ನು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಪಡೆದುಕೊಂಡಿದ್ದು, ಅವರ ಒಟ್ಟು ಮೊತ್ತ 3.6 ಬಿಲಿಯನ್ ಡಾಲರ್. ಜಾಗತಿಕ ಮಟ್ಟದಲ್ಲಿ ಇವರು 629 ಸ್ಥಾನ ಪಡೆದುಕೊಂಡಿದ್ದಾರೆ.
ಮೂರನೇ ಸ್ಥಾನವನ್ನು ಫಾರ್ಮಸಿಟಿಕಲ್ ವಲಯದ ಲೀನಾ ತಿವಾರಿ ಪಡೆದುಕೊಂಡಿದ್ದು, ಇವರ ಒಟ್ಟು ಆಸ್ತಿ ಮೊತ್ತ 2.4 ಬಿಲಿಯನ್ ಡಾಲರ್. ಜಾಗತಿಕ ಮಟ್ಟದಲ್ಲಿ 1020 ಸ್ಥಾನ ಪಡೆದುಕೊಂಡಿದ್ದಾರೆ.
ಎಂಜಿನಿಯರಿಂಗ್ ವಲಯದ ಅನು ಅಗಾ ಅವರು 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಆಸ್ತಿ 1.4 ಬಿಲಿಯನ್ ಡಾಲರ್. ಜಾಗತಿಕ ಮಟ್ಟದಲ್ಲಿ 1650 ಸ್ಥಾನ.
5ನೇ ಸ್ಥಾನವನ್ನು ಬ್ಯಾಂಕಿಂಗ್ ವಲಯದ ಮಧು ಕಪೂರ್ ಪಡೆದುಕೊಂಡಿದ್ದು, ಒಟ್ಟು ಆಸ್ತಿ 1.1 ಬಿಲಿಯನ್ ಡಾಲರ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.