ಥಾಣೆ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ಸಿದ್ಧನಿದ್ದಾನೆ, ಆದರೆ ಕೆಲವೊಂದು ಕಂಡೀಷನ್ಗಳನ್ನು ಇದಕ್ಕೆ ಆತ ನೀಡಿದ್ದಾನೆ. ಇದನ್ನು ಒಪ್ಪಿಕೊಳ್ಳಲು ಭಾರತ ಸರ್ಕಾರ ಸಿದ್ಧವಿಲ್ಲ ಎಂದು ಖ್ಯಾತ ಕ್ರಿಮಿನಲ್ ವಕೀಲ ಶ್ಯಾಂ ಕೆಶ್ವಾನಿ ಹೇಳಿದ್ದಾರೆ.
ಕೆಸ್ವಾನಿಯವರು ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಪರ ವಾದ ಮಂಡಿಸಿದ ಬಳಿಕ ಥಾಣೆ ನ್ಯಾಯಾಲಯದ ಹೊರಗಡೆ ಮಾತನಾಡಿದರು.
ದಾವೂದ್ ವಿಧಿಸಿರುವ ಕಂಡೀಷನ್ಗಳ ಪೈಕಿ ಆತನನ್ನು ಮುಂಬಯಿಯ ಅರ್ತುರ್ ರೋಡ್ ಸೆಂಟ್ರಲ್ ಜೈಲಿನಲ್ಲಿ ಅತ್ಯಂತ ಹೆಚ್ಚು ಭದ್ರತೆಯಲ್ಲಿ ಇಡಬೇಕು ಎಂಬುದು ಕೂಡ ಒಂದು ಎಂದಿದ್ದಾರೆ.
ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರ ಮುಖಾಂತರ ಐದು ವರ್ಷಗಳ ಹಿಂದೆ ಈ ಕಂಡೀಷನ್ನನ್ನು ಅವನು ಭಾರತ ಸರ್ಕಾರಕ್ಕೆ ತಿಳಿಸಿದ್ದ, ಆದರೆ ಇದನ್ನು ನಿರಾಕರಿಸಲಾಗಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.