ನವದೆಹಲಿ: ಚೆನ್ನೈನಲ್ಲಿ ಎಪ್ರಿಲ್ 11ರಿಂದ 14ರವರೆಗೆ ‘ಡೆಫ್ಎಕ್ಸ್ಪೋ 2018’ ಜರುಗಲಿದ್ದು, ಭಾರತ ಇಲ್ಲಿ ರಕ್ಷಣಾ ಉತ್ಪಾದನಾ ಹಬ್ ಆಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.
ಈ ಎಕ್ಸ್ಪೋ ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಮತ್ತು ಹಲವಾರು ರಕ್ಷಣಾ ಸಾಮಾಗ್ರಿಗಳು ರಫ್ತು ವ್ಯವಸ್ಥೆ ಮತ್ತು ವಾಯುಸೇನೆ-ನೌಕಾಸೇನೆ-ಭೂಸೇನೆಗಳ ಸಾಮರ್ಥ್ಯವನ್ನು ತೋರಿಸಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನ ಹಲವಾರು ಹಾರುವ ವೇದಿಕೆಗಳನ್ನು ಇಲ್ಲಿ ಅನಾವರಣಗೊಳ್ಳಲಿದೆ. ಅದರಲ್ಲಿ ದೇಶೀಯವಾಗಿ ವಿನ್ಯಾಸಡಿಸಿದ ಮತ್ತು ನಾಲ್ಕನೇ ತಲೆಮಾರಿನ ಲಘು ಯುದ್ಧ ಏರ್ಕ್ರಾಫ್ಟ್ ತೇಜಸ್, ಅಡ್ವಾನ್ಸ್ಡ್ ಲೈಟ್ ಹೆಲಿಕಾಫ್ಟರ್ ಧ್ರುವ್, ಡಾರ್ನಿಯರ್ ಸಿವಿಲಿಯನ್ ಏರ್ಕ್ರಾಫ್ಟ್ಗಳೂ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.