ನವದೆಹಲಿ: ಮುಂಬಯಿಯ ಎಲಿಫಿನ್ಸ್ಟೋನ್ ರೋಡ್ ಸ್ಟೇಶನ್ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಅಲ್ಲಿ ಪರ್ಯಾಯ ಪಾದಾಚಾರಿ ಓವರ್ಬ್ರಿಡ್ಜ್ನ್ನು ಸೇನೆ ನಿರ್ಮಾಣ ಮಾಡಿದ್ದು, ಇಂದು ಅದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಲೋಕಾರ್ಪಣೆ ಮಾಡಲಿದ್ದಾರೆ.
ದುರಂತ ಸಂಭವಿಸಿದ ಬಳಿಕ ಐದು ತಿಂಗಳೊಳಗೆ ಫೂಟ್ ಓವರ್ಬ್ರಿಡ್ಜ್ನ್ನು ಸೇನೆ ನಿರ್ಮಾಣ ಮಾಡಿದ್ದು, ಈ ಬ್ರಿಡ್ಜ್ ಪಶ್ಚಿಮ ಮತ್ತು ಸೆಂಟ್ರಲ್ ರೈಲ್ವೇ ಟ್ರ್ಯಾಕ್ ನಡುವೆ ಹಾದು ಹೋಗಿದೆ. ಪೂರ್ವದಿಂದ ಪರೇಲ್ ಸ್ಟೇಶನ್ ಮತ್ತು ಪಶ್ಚಿಮದಲ್ಲಿ ಎಲಿಫಿನ್ಸ್ಟೋನ್ ರೋಡ್ ಸ್ಟೇಶನ್ನ ಹೊರವಲಯದ ಫೂಲ್ ವಾಲಿ ಗಲಿಯನ್ನು ಸಂಪರ್ಕಿಸುತ್ತದೆ.
ಸೆ.29ರಂದು ದುರಂತ ನಡೆದ ಬಳಿಕ ಸೇನೆಯನ್ನು ಬ್ರಿಡ್ಜ್ ನಿರ್ಮಾಣಕ್ಕೆಂದು ನಿಯೋಜನೆಗೊಳಿಸಲಾಗಿತ್ತು. 250 ಮಂದಿ ಪ್ರತಿನಿತ್ಯ ಇದರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ೫ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.