ನವದೆಹಲಿ: ರಾಜ್ಯಸಭೆಯ 58 ಸದ್ಯರುಗಳು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಿವೃತ್ತರಾಗಲಿರುವ ಹಿನ್ನಲೆಯಲ್ಲಿ ಈ ಸ್ಥಾನಗಳಿಗೆ ಮಾ.23ರಂದು ಚುನಾವಣೆ ನಡೆಯಲಿದೆ.
ಡಿಸೆಂಬರ್ನಲ್ಲಿ ಕೇರಳ ಎಂಪಿ ವೀರೇಂದ್ರ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರ ಅವಧಿ 2022ರ ಎಪ್ರಿಲ್ ನಲ್ಲಿ ಅಂತ್ಯವಾಗಲಿತ್ತು. ಆದರೆ ಅವರು ರಾಜೀನಾಮೆ ಸಲ್ಲಿಸಿದ ಕಾರಣ ಉಪ ಚುನಾವಣೆಯೂ ನಡೆಯಲಿದೆ.
ಒಟ್ಟು16 ರಾಜ್ಯಗಳ 58 ರಾಜ್ಯಸಭಾ ಸದಸ್ಯರು ಅವಧಿ ಎಪ್ರಿಲ್ ಮತ್ತು ಮೇನಲ್ಲಿ ಅಂತ್ಯವಾಗಲಿದೆ. ಇದರಲ್ಲಿ ಯುಪಿಯ 10 ಸದಸ್ಯರು, ಬಿಹಾರದ 6, ಮಧ್ಯಪ್ರದೇಶ ಮತ್ತು ಪಶ್ಚಿಮಬಂಗಾಳದ 5, ಗುಜರಾತ್, ಕರ್ನಾಟಕದ 4, ಆಂಧ್ರ , ತೆಲಂಗಾಣ, ಒರಿಸ್ಸಾ, ರಾಜಸ್ಥಾನದ ತಲಾ 3, ಜಾರ್ಖಾಂಡ್ನ 2, ಛತ್ತೀಸ್ಗಢ, ಹರಿಯಾಣ, ಹಿಮಾಚಲ, ಉತ್ತರಾಖಂಡದ 1 ಸದಸ್ಯರು ಇದ್ದಾರೆ.
ನಾಮಪತ್ರ ಸಲ್ಲಿಕೆಗೆ ಮಾ.12 ಕೊನೆಯ ದಿನಾಂಕ, ಮಾ.23 ಚುನಾವಣಾ ದಿನವಾಗಿದ್ದು, ಅಂದೇ ಮತಎಣಿಕೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.