ಲಕ್ನೋ: ಲಕ್ನೋದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ‘ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶ 2018’ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಇದೇ ವೇಳೆ ಅವರು ಸಮಾವೇಶದಲ್ಲಿ ಆಯೋಜನೆಗೊಳಿಸಲಾದ ಎಕ್ಸಿಬಿಷನ್ಗೆ ತೆರಳಿ ವೀಕ್ಷಿಸಿದರು.
ಉತ್ತರಪ್ರದೇಶದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಅವಕಾಶಗಳಿವೆ ಎಂಬುದನ್ನು ತೋರಿಸಿಕೊಡುವ ಸಲುವಾಗಿ ಅಲ್ಲಿನ ಸರ್ಕಾರ ಸಮಾವೇಶವನ್ನು ಆಯೋಜನೆಗೊಳಿಸಿದೆ.
ಫಿನ್ಲ್ಯಾಂಡ್, ನೆದರ್ಲ್ಯಾಂಡ್, ಜಪಾನ್, ಥಾಯ್ಲೆಂಡ್, ಮಾರಿಶಿಯಸ್ ದೇಶಗಳ ನಾಯಕರು, ಉದ್ಯಮಿಗಳು ಸೇರಿದಂತೆ ಹಲವಾರು ಉದ್ಯಮ ದಿಗ್ಗಜರು ಇದರಲ್ಲಿ ಭಾಗಿಯಾಗಲಿದ್ದಾರೆ.