ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿ ಮಾಡುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಹಿಂದಿನ ಪ್ರಧಾನಿಯೊಬ್ಬರು ರೂ.5000 ಲೋನ್ ಪಡೆದುಕೊಂಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.
ಹೌದು! ಲಾಲ್ ಬಹುದ್ದೂರ್ ಶಾಸ್ತ್ರೀಯವರು ಕುಟುಂಬದ ಒತ್ತಡದ ಮೇರೆಗೆ ಕಾರೊಂದನ್ನು ಖರೀದಿಸಲು ಮುಂದಾಗಿದ್ದರು. ಫಿಯೆಟ್ ಕಾರಿನ ಬೆಲೆ ರೂ.12 ಸಾವಿರವಾಗಿತ್ತು, ಆದರೆ ಅವರ ಬಳಿ ಇದ್ದುದು ಕೇವಲ ರೂ.7000. ಹೀಗಾಗೀ ಅವರು ಪಿಎನ್ಬಿಯಿಂದ ರೂ.5 ಸಾವಿರ ಲೋನ್ ಪಡೆದುಕೊಂಡಿದ್ದರು.
ಬ್ಯಾಂಕ್ ತ್ವರಿತವಾಗಿ ಅವರಿಗೆ ಸಾಲ ಮಂಜೂರು ಮಾಡಿತ್ತು, ಆಗ ಶಾಸ್ತ್ರಿಗಳು ಸಾಮಾನ್ಯನಿಗೂ ಇದೇ ರೀತಿ ತ್ವರಿತವಾಗಿ ಲೋನ್ ಮಂಜೂರು ಮಾಡಬೇಕೆಂದು ಸಲಹೆ ನೀಡಿದ್ದರು.
ದುರಾದೃಷ್ಟವಶಾತ್ ಲೋನ್ ಅವಧಿ ಮುಗಿಯುವ ಮುನ್ನವೇ ಶಾಸ್ತ್ರೀಜಿ ದಿವಂಗತರಾದರು. ಬಳಿಕ ಅವರ ಪತ್ನಿ ತನ್ನ ಪಿಂಚಣಿ ಹಣದಲ್ಲಿ ಸಾಲವನ್ನು ಮರುಸಂದಾಯ ಮಾಡಿದ್ದರು.
ಇಂದಿಗೂ ಆ ಫಿಯೆಟ್ ಕಾರು ಶಾಸ್ತ್ರೀಜಿಗಳ ಮನೆ ಮುಂದೆ ನಿಂತಿದೆ. ಒರ್ವ ಪ್ರಮಾಣಿಕ ರಾಜಕಾರಣಿ, ಒರ್ವ ಪ್ರಮಾಣಿಕ ಗ್ರಾಹಕ ಹೇಗಿರಬೇಕು ಎಂಬುದನ್ನು ಶಾಸ್ತ್ರೀಜಿ ಅಂದು ತೋರಿಸಿಕೊಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.