ಶ್ರೀನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆಹ್ವಾನದ ಮೇರೆಗೆ ‘ವತನ್ಕೋ ಜಾನೋ’ ಕಾರ್ಯದಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಯುವಕರು ರಾಷ್ಟ್ರಪತಿ ಭವನದಲ್ಲಿ ಅವರನ್ನು ಭೇಟಿಯಾದರು.
‘ವತನ್ಕೋ ಜಾನೋ’ ಕಾರ್ಯಕ್ರಮವನ್ನು ಗೃಹ ವ್ಯವಹಾರಗಳ ಸಚಿವಾಲಯ ಇದನ್ನು ಆಯೋಜನೆಗೊಳಿಸಿದ್ದು, ಯುವಕರು ಆಗ್ರಾ, ಜೈಪುರ, ಅಜ್ಮೇರ್ಗಳಿಗೆ ಭೇಟಿಕೊಟ್ಟು, ದೆಹಲಿಗೆ ಇಂದು ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ರಾಷ್ಟ್ರಪತಿಗಳು, ‘ವಿವಿಧ ಜಾಗಗಳಿಗೆ ತೆರಳಿರುವ ಯುವಕರು ದೇಶದ ವೈವಿಧ್ಯ ಸಂಸ್ಕೃತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕಣಿವೆಯ ಯುವ ಸಾಧಕರ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ’ ಎಂದರು.