ನವದೆಹಲಿ: ಭಾರತದ ಸುಮಾರು 40 ಭಾಷೆಗಳು ಮತ್ತು ಉಪ ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಕೇವಲ 5 ಸಾವಿರ ಜನರಷ್ಟೇ ಇದನ್ನು ಮಾತನಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಸೆನ್ಸಸ್ ಡೈರೆಕ್ಟೋರೇಟ್ ವರದಿಯ ಪ್ರಕಾರ, 22 ಬುಡಕಟ್ಟು ಭಾಷೆಗಳು ಮತ್ತು 100 ಬುಡಕಟ್ಟು ಅಲ್ಲದ ಭಾಷೆಗಳನ್ನು ದೇಶದಲ್ಲಿ ಅಧಿಕ ಅಂದರೆ ಒಂದು ಲಕ್ಷಕ್ಕೂ ಅಧಿಕ ಜನರು ಬಳಸುತ್ತಿದ್ದಾರೆ.
ಆದರೆ 42 ಭಾಷೆಗಳನ್ನು 10 ಸಾವಿರಕ್ಕೂ ಕಡಿಮೆ ಜನರು ಮಾತನಾಡುತ್ತಿದ್ದಾರೆ. ಇವುಗಳನ್ನು ಅಪಾಯದಂಚಿನಲ್ಲಿರುವ ಭಾಷೆ ಎಂದು ಗುರುತಿಸಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಂಡಮಾನ್ ನಿಕೋಬಾರ್ನ, ಹಿಮಾಚಲದ ಹಲವಾರು ಬುಡಕಟ್ಟು ಭಾಷೆಗಳು ಅಳಿವಿನಂಚಿನಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.