ನವದೆಹಲಿ: ಎಲೆಕ್ಟ್ರಿಕ್ ಕ್ರಾಂತಿಯ ನಿರೀಕ್ಷೆಯಲ್ಲಿರುವ ಭಾರತದ ಆಟೋ ಶೋಗಳಲ್ಲಿ ಎಲೆಕ್ಟ್ರಿಕ್ ಕಾರುಗಳೇ ಕೇಂದ್ರಬಿಂದುಗಳಾಗಿವೆ. ಇಲ್ಲಿ ಆಟೋ ಉತ್ಪಾದಕರನ್ನು ಗ್ರೀನ್ ವೆಹ್ಹಿಕಲ್ಗಳತ್ತ ಮುಖ ಮಾಡುವಂತೆ ಉತ್ತೇಜಿಸಲಾಗುತ್ತದೆ.
2030ರ ವೇಳೆಗೆ ರಸ್ತೆಯಲ್ಲಿನ ಎಲ್ಲಾ ಕಾರುಗಳು ಎಲೆಕ್ಟ್ರಿಕ್ ಮಯವಾಗಲಿ ಎಂಬ ಮಹತ್ವದ ಗುರಿಯನ್ನು ನರೇಂದ್ರ ಮೋದಿ ಸರ್ಕಾರ ಇಟ್ಟುಕೊಂಡಿದೆ.
1.25 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತ ಪೆಟ್ರೋಲ್, ಡಿಸೇಲ್ ವಾಹನಗಳ ಬಳಕೆಯನ್ನು ಹೀಗೆಯೇ ಮುಂದುವರೆಸಿದರೆ ಭವಿಷ್ಯದಲ್ಲಿ ಪರಿಸರದ ಸ್ಥಿತಿ ಅತ್ಯಂತ ಭೀಕರವಾಗಲಿದೆ. ಉಸಿರಾಡಲೂ ಉತ್ತಮ ಗಾಳಿಯಿಲ್ಲದ ಪರಿಸ್ಥಿತಿ ಬಂದೊದಗುವ ಅಪಾಯವಿದೆ. ಹೀಗಾಗಿಯೇ ಕೇಂದ್ರ ಎಲೆಕ್ಟ್ರಿಕ್ ವೆಹ್ಹಿಕಲ್ಗಳ ಬಳಕೆಯನ್ನು ಉತ್ತೇಜಿಸಲು ಶತ ಪ್ರಯತ್ನ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.