ಕೋಲ್ಕತ್ತಾ: ಕೋಲ್ಕತ್ತಾದ ನೇತಾಜೀ ಸುಭಾಷ್ ಚಂದ್ರ ಬೋಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನಯಾನ ಪ್ರಾಧಿಕಾರದ ವತಿಯಿಂದ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನನ್ನು ಅಳವಡಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆ ಪ್ರಯಾಣವನ್ನು ಸುಗಮಗೊಳಿಸಲು ಮತ್ತು ಋತುಚಕ್ರದ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯವನ್ನು ಪ್ರಾಧಿಕಾರ ಮಾಡಿದೆ. ಇದಕ್ಕೆ ಜನರ ಮೆಚ್ಚುಗೆಯೂ ವ್ಯಕ್ತವಾಗಿದೆ.
ವಿಮಾನನಿಲ್ದಾಣದ ಟರ್ಮಿನಲ್ ಕಟ್ಟಡದ ಆಗಮನ ಮತ್ತು ನಿಗರ್ಮನದ ಆವರಣದಲ್ಲಿನ ಲೇಡಿಸ್ ಟಾಯ್ಲೆಟ್ಗಳಲ್ಲಿ ಒಟ್ಟು 22 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ಗಳನ್ನು ಅಳವಡಿಸಲಾಗಿದೆ.
ಜನವರಿಯಿಂದಲೇ ಈ ಸೌಲಭ್ಯ ಆರಂಭಗೊಂಡಿದ್ದು, ತಿಂಗಳಿಗೆ 700-800 ಪ್ಯಾಡ್ಗಳು ಖಾಲಿಯಾಗುತ್ತಿವೆ. ರೂ.5ನ್ನು ತೆತ್ತು ಮಹಿಳೆಯರು ಇದನ್ನು ಪಡೆದುಕೊಳ್ಳಬಹುದು.
ಈ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 60ಸಾವಿರ ಜನರ ಆಗಮನ ನಿರ್ಗಮನ ನಡೆಯುತ್ತಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.