ನವದೆಹಲಿ: ಕಚ್ಛಾತೈಲಗಳ ಮೇಲೆ ವಿಧಿಸಲಾಗುವ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಯನ್ನು ತೆಗೆದು ಹಾಕಿ ಅದರ ಜಾಗಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ತರುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮುಂಬರುವ ಒಂದು ಅಥವಾ ಎರಡು ವರ್ಷದಲ್ಲಿ ಅಬಕಾರಿ ಮತ್ತು ಮೌಲ್ಯವರ್ಧಿತ ಸುಂಕವನ್ನು ಜಿಎಸ್ಟಿಗೆ ಬದಲಾಯಿಸುವುದಾಗಿ ಅವರು ಹೇಳಿದ್ದಾರೆ.
ಪ್ರಸ್ತುತ ಕಚ್ಛಾತೈಲದ ಮೇಲಿರುವ ಅತ್ಯಧಿಕ ಅಬಕಾರಿ ಸುಂಕದ ಬಗ್ಗೆ ಮಾತನಾಡಿದ ಅವರು, ನಮಗೆ ಹಣದುಬ್ಬರ ಬೇಕಾಗಿಲ್ಲ, ಗ್ರಾಹಕರ ಹಿತಾಸಕ್ತಿ, ಗ್ರಾಹಕ ಸೇವೆಯನ್ನು ಗಮನದಲ್ಲಿರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲವನ್ನೂಒಟ್ಟಿಗೆ ಮಾಡುವುದಿಲ್ಲ, ಫಂಡ್ಗಳ ಅಗತ್ಯವಿದೆ ಎಂದಿದ್ದಾರೆ.