ನವದೆಹಲಿ: ಏಷ್ಯನ್ ಗೇಮ್ಸ್ ಇನ್ವಿಟೇಶನಲ್ ಟೂರ್ನಮೆಂಟ್ನಲ್ಲಿ ಭಾರತ 13 ಚಿನ್ನದ ಪದಕ ಸೇರಿದಂತೆ, ಒಟ್ಟು 22 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಪುರುಷರ 800 ಮೀಟರ್ ಓಟ, 400 ಮೀಟರ್ ಓಟ, ಮಹಿಳಾ ಮತ್ತು ಪುರುಷರ 4×400 ಮೀಟರ್ನಲ್ಲಿ ಭಾರತೀಯರು ಚಿನ್ನ ಗೆದ್ದುಕೊಂಡಿದ್ದಾರೆ. ಹಮ್ಮರ್ ಥ್ರೋನಲ್ಲಿ ಸರಿತಾ ಸಿಂಗ್ ಬೆಳ್ಳಿ ಜಯಿಸಿದ್ದಾರೆ. ಪುರುಷರ ಟ್ರಿಪಲ್ ಜಂಪ್ನಲ್ಲಿ ಕಮಲ್ರಾಜ್ ಕನರಾಜ್ ಕಂಚು ಗೆದ್ದಿದ್ದಾರೆ.
ಬುಧವಾರ ಕ್ರೀಡಾಕೂಟದ ಅಂತ್ಯದ ವೇಳೆಗೆ ಭಾರತ 13 ಬಂಗಾರ, 5 ಬೆಳ್ಳಿ ಮತ್ತು 4 ಕಂಚನ್ನು ಗೆದ್ದುಕೊಂಡಿದೆ.