ಕಾರವಾರ: ಪ್ರೇಮಿಗಳ ದಿನಾಚರಣೆಯ ನಿಮಿತ್ತ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ವಿಶೇಷವಾಗಿ ಸ್ಕೂಬಾ ಡೈವಿಂಗ್ ಅನ್ನು ಆಯೋಜಿಸಿತ್ತು. ಪ್ರೇಮಿಗಳಿಗಾಗಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ವಿಶೇಷವಾಗಿ ಅದು ಅವಕಾಶ ಮಾಡಿಕೊಟ್ಟಿತ್ತು.
ತನ್ನಿಮಿತ್ತ ಮುರುಡೇಶ್ವರಕ್ಕೆ ಆಗಮಿಸಿದ್ದ ಜೋಡಿಯೊಂದು ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದಲ್ಲಿ ಆಚರಿಸಿಕೊಂಡರು.
ಸಂದೀಪ್ ಹಾಗೂ ಲಾವಣ್ಯ ದಂಪತಿಯೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಮುದ್ರದಾಳದಲ್ಲಿ ಆಚರಿಸಿಕೊಂಡ ಜೋಡಿ.
ಸಮುದ್ರದಳಾದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡ ಈ ಜೋಡಿಯು, ಅಲ್ಲೇ ತಮ್ಮ ಮದುವೆಯ ದಿನದ ಮೆಲುಕು ಹಾಕಿದರು. ಒಬ್ಬರಿಗೊಬ್ಬರು ಸಮುದ್ರದೊಳಗೆ ಗುಲಾಬಿಯ ಗುಚ್ಛ ಹಿಡಿದು ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡರು.
ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ನುರಿತ ಸ್ಕೂಬಾ ಡೈವರ್ಸ್ ಗಳು ಈ ಜೋಡಿಯನ್ನು ಸಮುದ್ರದಾಳಕ್ಕೆ ಕರೆದೊಯ್ದಿದ್ದರು.
ಪ್ರೇಮಿಗಳಿಗಾಗಿ ರಿಯಾಯಿತಿ ದರದಲ್ಲಿ, ಉಚಿತ ವಸತಿ ಸೌಲಭ್ಯದೊಂದಿಗೆ ಫೆ.18ರವರೆಗೆ ಈ ವಿಶೇಷ ಅವಕಾಶವನ್ನು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಕಲ್ಪಿಸಿದೆ.
ದೇವರಾಜ ನಾಯ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.