ಹೈದರಾಬಾದ್: ಭಾರತದ ನೆರೆಯ ಸೌತ್ ಈಸ್ಟ್ ಏಷ್ಯಾ ರಾಷ್ಟ್ರಗಳಿಗೆ ಬೈಕ್ ಯಾತ್ರೆ ನಡೆಸಲು ಸಜ್ಜಾಗಿದ್ದಾರೆ ಹೈದರಾಬಾದ್ನ ನಾಲ್ವರು ಯುವತಿಯರು. ಭಾರತ ಮಯನ್ಮಾರ್-ಥಾಯ್ಲಂಡ್ ಟ್ರೈಲ್ಯಾಟರಲ್ ಹೈವೇ ಮೂಲಕ ಇವರ ಪರ್ಯಟನೆ ಸಾಗಲಿದೆ.
ಜೈ ಭಾರತಿ, ಶಿಲ್ಪಾ ಬಾಲಕೃಷ್ಣನ್, ಎ.ಎಸ್.ಡಿ ಶಾಂತಿ, ಪಿಯಾ ಬಹದ್ದೂರ್ ಬೈಕ್ ಪರ್ಯಟನೆಗೆ ಸಜ್ಜಾಗಿದ್ದಾರೆ. ತೆಲಂಗಾಣದ ಪ್ರವಾಸೋದ್ಯಮ ಇಲಾಖೆ ಅವರನ್ನು ಸಂತಸದಿಂದ ಬೀಳ್ಕೊಟ್ಟಿದೆ.
ಭಾರತ, ಮಯನ್ಮಾರ್, ಥಾಯ್ಲೆಂಡ್, ಲೋಸ್, ಕಾಂಬೋಡಿಯಾ, ವಿಯೆಟ್ನಾಂ, ಬಾಂಗ್ಲಾದೇಶದ ಸುಮಾರು 16,992 ಕಿ.ಮೀಟರ್ ದೂರ ಇವರು ಪ್ರಯಾಣಿಸಲಿದ್ದಾರೆ.
ಭಾರತದ ಪ್ರವಾಸೋದ್ಯಮ, ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಅಲ್ಲಿ ಪ್ರಚಾಋಗೊಳಿಸುವುದು ಇವರ ಮುಖ್ಯ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.