ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನ್ನ ರಾಮಲ್ಲಾ ನಗರಕ್ಕೆ ಇಂದು ಭೇಟಿಕೊಟ್ಟಿದ್ದಾರೆ. ಪ್ಯಾಲೇಸ್ತೇನ್ಗೆ ಬಂದಿಳಿದ ತಕ್ಷಣ ಟ್ವಿಟ್ ಮಾಡಿರುವ ಅವರು, ‘ಪ್ಯಾಲೇಸ್ತೇನ್ ತಲುಪಿದೆ. ದ್ವಿಪಕ್ಷೀಯ ಸಂಬಂಧ ಬಲಗೊಳಿಸುವಲ್ಲಿ ಇದು ಐತಿಹಾಸಿಕ ಭೇಟಿ’ ಎಂದಿದ್ದಾರೆ.
ಪ್ಯಾಲೇಸ್ತೇನ್ಗೆ ಅಧಿಕೃತವಾಗಿ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ. ಜೋರ್ಡನ್ ಆರ್ಮಿ ಹೆಲಿಕಾಫ್ಟರ್ನಲ್ಲಿ ಅವರು ಅಮನ್ನಿಂದ ರಾಮಲ್ಲಾಗೆ ಪ್ರಯಾಣಿಸಿದರು. ಅಲ್ಲಿ ಅವರನ್ನು ಅಲ್ಲಿನ ಪ್ರಧಾನಿ ರಮಿ ಹಮದಲ್ಲಾಹ ಬರಮಾಡಿಕೊಂಡರು.
ಪ್ಯಾಲೇಸ್ತೇನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಒಟ್ಟು 3 ಗಂಟೆಗಳ ಕಾಲ ಅವರು ಅಲ್ಲಿ ಇರಲಿದ್ದಾರೆ.