ಬೆಂಗಳೂರು: ಎಲೆಕ್ಟ್ರಿಕ್ ವೆಹ್ಹಿಕಲ್ಗಳ ತಯಾರಿಕೆ ಮತ್ತು ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಸರ್ಕಾರ ಬೆಂಗಳೂರಿನ ವಿವಿಧೆಡೆ 11 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ದೇಶದ ಮೊದಲ ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್ ಫೆ.೧೫ರಂದು ಬೆಂಗಳೂರಿನ ಬೆಸ್ಕಾಂ ಕಾರ್ಪೋರೇಟ್ ಕಛೇರಿಯ ಕೆಆರ್ ಸರ್ಕಲ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮುಂದಿನ ಆರು ತಿಂಗಳುಗಳಲ್ಲಿ ಇಂತಹ 11 ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪನೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಇಲ್ಲಿ ಪ್ರತಿ ಎಲೆಕ್ಟ್ರಿಕ್ ವೆಹ್ಹಿಕಲ್ಗಳು 25ರಿಂದ 35 ನಿಮಿಷಗಳ ಕಾಲ ಜಾರ್ಚಿಂಗ್ ಮಾಡಬಹುದಾಗಿದೆ.