ನವದೆಹಲಿ: ಮಕ್ಕಳ ಕಾಳಜಿಗಾಗಿ ಜಂಕ್ ಫುಡ್ ಜಾಹೀರಾತುಗಳನ್ನು ಮಕ್ಕಳ ಚಾನೆಲ್ಗಳಲ್ಲಿ ಪ್ರಸಾರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತೀಯ ಆಹಾರ ಮತ್ತು ಪಾನೀಯ ಒಕ್ಕೂಟ (FBIA)ವು ಸ್ವಯಂಪ್ರೇರಿತವಾಗಿ ಜಂಕ್ ಫುಡ್ ಹಾಗೂ ಪಾನೀಯ ಜಾಹೀರಾತುಗಳನ್ನು ಮಕ್ಕಳ ಕಾಳಜಿಗಾಗಿ ರದ್ದುಗೊಳಿಸಲು ನಿರ್ಧರಿಸಿದೆ ಎಂದು ಲೋಕಸಭೆ ಕಲಾಪದ ಪ್ರಶ್ನೋತ್ತರ ಸಮಯದಲ್ಲಿ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾತನಾಡಿದರು.
ಆದರೆ ದೂರದರ್ಶನ ಸೇರಿದಂತೆ ಮತ್ತಿನ್ನಿತರ ಚಾನೆಲ್ಗಳಲ್ಲಿ ಜಂಕ್ ಫುಡ್ ಕುರಿತಾದ ಜಾಹೀರಾತುಗಳನ್ನು ರದ್ದು ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಹೆಚ್ಚು ಕೊಬ್ಬಿನಂಶ, ಸಕ್ಕರೆ ಹಾಗೂ ಉಪ್ಪಿನಂಶವಿರುವ ಆಹಾರಗಳ ಕುರಿತು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI)ದಿಂದ ರಚಿಸಲಾದ ಪರಿಣಿತರ ತಂಡ ವರದಿ ತಯಾರಿಸಿ, ಇವುಗಳ ಜಾಹೀರಾತನ್ನು ಪ್ರಸಾರ ಮಾಡದಿರಲು ಶಿಫಾರಸ್ಸು ಮಾಡಿತ್ತು. ಇದರ ಹಿನ್ನೆಲೆಯಲ್ಲಿ ಪ್ರಮುಖ 9 ಆಹಾರ ಕಂಪೆನಿಗಳು ಮಕ್ಕಳ ಚಾನೆಲ್ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳನ್ನು ಪ್ರಸಾರ ಮಾಡದಿರಲು ಕೇಂದ್ರ ನಿರ್ಧರಿಸಿದೆ.
ವರದಿಗಳ ಪ್ರಕಾರ ಕೋಕಾ-ಕೋಲಾ, ನೆಸ್ಲೆ, ಪೆಪ್ಸಿ ಮತ್ತಿನ್ನಿತರ ಕಂಪೆನಿಗಳು ಸರ್ಕಾರದ ಈ ನಿಯಮವನ್ನು ಒಪ್ಪಿಕೊಂಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.