ಮುಂಬಯಿ: ಮಹಾರಾಷ್ಟ್ರ ಸರ್ಕಾರ ಆಟೋ ರಿಕ್ಷಾಗಳಿಗೆ ಮೊಬೈಲ್ ಅಪ್ಲಿಕೇಶನ್ವೊಂದನ್ನು ಹೊರ ತರುತ್ತಿದ್ದು, ಇದು ರಿಕ್ಷಾ ಸೇವೆಯನ್ನು ಸಂಪೂರ್ಣ ಪಾರದರ್ಶಕ ಮತ್ತು ಸಮರ್ಥವಾಗಿಸಲಿದೆ.
ಕಡಿಮೆ ದೂರಕ್ಕೆ ಬರಲು ನಿರಾಕರಣೆ ಮಾಡುವ ಡ್ರೈವರ್ಗಳು, ನಿಗದಿಗಿಂತ ಹೆಚ್ಚು ಜನರನ್ನು ಕೊಂಡೊಯ್ಯುವ, ತುರ್ತು ಸಂದರ್ಭದಲ್ಲಿ ಹೆಚ್ಚು ಹಣ ವಸೂಲಿ ಮಾಡುವ ಅಟೋ ಡ್ರೈವರ್ಗಳಿಗೆ ಈ ಆಪ್ ಕಡಿವಾಣ ಹಾಕಲಿದೆ.
ಮೊದಲು ಪುಣೆ ಸಿಟಿಯಲ್ಲಿ ಈ ಆಪ್ ಜಾರಿಗೆ ಬರಲಿದ್ದು, ಬಳಿಕ ಇತರ ಭಾಗಗಳಿಗೂ ವಿಸ್ತರಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.