Wednesday, February 7th, 2018
News13
ಬಂಟ್ವಾಳ: ಸದಾ ಬಂದೋಬಸ್ತ್ ಬಿಝಿಯ ಮಧ್ಯೆಯೂ ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಓರ್ವರು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಪುತ್ತೂರು ರಾಮಮೂಲೆ ನಿವಾಸಿ ವೆಂಕಟೇಶ್ ರಾಜೀವಿ ದಂಪತಿಯವರ ಪುತ್ರಿ ವನಿತ ಆರ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕ್ರೀಡಾಕೂಟದ ಅಥ್ಲೆಟಿಕ್ ವಿಭಾಗದಲ್ಲಿ 100, 200, 400 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಉದ್ದ ಜಿಗಿತ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಉತ್ತರಾಖಂಡದ ಡೆಹರಾಡೂನ್ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆದಿದೆ.