ಬಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಾರ್ಟ್ ರೇಂಜ್ ನ್ಯೂಕ್ಲಿಯರ್ ಸಾಮರ್ಥ್ಯದ ಅಗ್ನಿ-1 ಬ್ಯಾಲೆಸ್ಟಿಕ್ ಮಿಸೈಲ್ನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಲಾಗಿದೆ.
ಒರಿಸ್ಸಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಬೆಳಿಗ್ಗೆ 8.30ರ ಸುಮಾರಿಗೆ ಭಾರತೀಯ ಸೇನೆಯ ಸ್ಟ್ರೇಟಜಿಕ್ ಫೋರ್ಸ್ ಕಮಾಂಡ್ ವತಿಯಿಂದ ಪರೀಕ್ಷಾರ್ಥ ಉಡಾವಣೆಗೊಳಿಸಲಾಯಿತು.
ಅಗ್ನಿ 1 ಮಿಸೈಲ್ ಸುಮಾರು 700 ಕಿಮೀಗಳ ಸ್ಟ್ರೈಕ್ ರೇಂಜ್ ಹೊಂದಿದ್ದು, ಮೊಬೈಲ್ ಲಾಂಚರ್ನ ಪ್ಯಾಡ್ 4 ಮೂಲಕ ಉಡಾವಣೆಗೊಳಿಸಲಾಯಿತು.
12 ಟನ್ ತೂಕವನ್ನು ಇದು ಹೊಂದಿದ್ದು, 1 ಸಾವಿರ ಕೆಜಿ ತೂಕದ ಸರಕು ಹೊತ್ತೊಯ್ಯಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.