News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಾರದಾ ಕಾಲೇಜಿಗೆ ತ್ರಿವಳಿ ರ್ಯಾಂಕ್­ಗಳ ಗರಿ – ದಾಖಲೆಯತ್ತ ಬಿ.ಎಸ್ಸಿ. ಆ್ಯನಿಮೇಷನ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಏಪ್ರಿಲ್/ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ (ಆ್ಯನಿಮೇಶನ್ ಅಂಡ್ ವಿಶುವಲ್ ಎಫೆಕ್ಟ್) ಪರೀಕ್ಷೆಯಲ್ಲಿ ಕಳೆದ ವರ್ಷಗಳಂತೆ ಈ ಬಾರಿಯೂ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್­ಗಳು ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಶಾರದಾ ಕಾಲೇಜಿಗೆ ದೊರೆತಿದೆ.

ಪ್ರಭಾತ್ ಕೆ. ಪ್ರಥಮ (3,734 ಅಂಕಗಳು), ಸೌರಭ್ ಯು. ಆಚಾರ್ಯ ದ್ವಿತೀಯ (3,611 ಅಂಕಗಳು) ಹಾಗೂ ರೋಹಿತಾಶ್ವ ಎನ್. ತೃತೀಯ (3,597 ಅಂಕಗಳು) ರ್ಯಾಂಕ್­ಗಳನ್ನು ಪಡೆದಿರುತ್ತಾರೆ. ಶಾರದಾ ಕಾಲೇಜು ನಿರಂತರವಾಗಿ ಎಲ್ಲಾ ಕೋರ್ಸುಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸಿರುವುದು ಮಾತ್ರವಲ್ಲದೆ, ವೈಶಿಷ್ಟ್ಯಪೂರ್ಣ ಶಿಸ್ತುಬದ್ಧ ಶಿಕ್ಷಣಕ್ಕೆ ಸಾಮಾಜಿಕ ಮನ್ನಣೆಯನ್ನು ಪಡೆದಿದೆ. ರ್ಯಾಂಕ್ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿರುತ್ತಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top