ಮುಂಬಯಿ: ವಿಶ್ವದ ಅತ್ಯಂತ ಜನನಿಬಿಡ ಸಿಂಗಲ್ ರನ್ವೇ ಏರ್ಪೋರ್ಟ್ ಎಂದು ಹೆಸರು ಪಡೆದುಕೊಂಡಿರುವ ಮುಂಬಯಿ ಏರ್ಪೋರ್ಟ್ ಹೊಸ ದಾಖಲೆಯೊಂದನ್ನು ಮಾಡಿದೆ. 24ಗಂಟೆಯಲ್ಲಿ ಬರೋಬ್ಬರಿ 980 ವಿಮಾನಗಳನ್ನು ಇದು ನಿಭಾಯಿಸಿದೆ.
ಜ.20ರಂದು ಮುಂಬಯಿ ಏರ್ಪೋರ್ಟ್ನಲ್ಲಿ ಒಟ್ಟು ೯೮೦ ವಿಮಾನಗಳು ಹತ್ತಿ ಇಳಿದಿವೆ. ಈ ಮೂಲಕ ಕಳೆದ ವರ್ಷ ಡಿ.6 ರಂದು 974 ವಿಮಾನಗಳನ್ನು ನಿಭಾಯಿಸಿದ ತನ್ನದೇ ದಾಖಲೆಯನ್ನು ಈ ಏರ್ಪೋರ್ಟ್ ಮುರಿದು ಹೊಸ ದಾಖಲೆಯನ್ನು ನಿರ್ಮಿಸಿದೆ.
ಜಾಗದ ಸಮಸ್ಯೆ ಎದುರಿಸುತ್ತಿದ್ದರೂ ಕೂಡ ಅತ್ಯಂತ ಅಚ್ಚುಕಟ್ಟಾಗಿ ಇಷ್ಟೊಂದು ವಿಮಾನಗಳ ದಟ್ಟನೆಯನ್ನು ಮುಂಬಯಿ ಏರ್ಪೋರ್ಟ್ ನಿಭಾಯಿಸುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.