ಬೆಂಗಳೂರು: ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಮತ್ತಷ್ಟು ಉತ್ತೇಜನ ಎಂಬಂತೆ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಲಘು ಯುದ್ಧ ಹೆಲಿಕಾಫ್ಟರ್ನ ಮೊದಲ ಹಾರಾಟವನ್ನು ತನ್ನದೇ ಆದ ಸ್ವಂತ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ಹಾರಾಟ ನಿಯಂತ್ರಣ ವ್ಯವಸ್ಥೆ(Automatic Flight Control System )ಯೊಂದಿಗೆ ನಡೆಸಿತು. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ.
‘ಈ ಪ್ರಥಮ ಹಾರಾಟ ನಿಜಕ್ಕೂ ಅದ್ಭುತ ಅನುಭವವಾಗಿತ್ತು, 20 ನಿಮಿಷಗಳ ಕಾಲ ಸ್ವಯಂಚಾಲಿತ ಹಾರಾಟ ನಿಯಂತ್ರಣ ವ್ಯವಸ್ಥೆಯೊಂದಿಗೆ ಹೆಲಿಕಾಫ್ಟರ್ ಹಾರಾಟ ನಡೆಸಿತು. ನಿವೃತ್ತ ವಿಂಗ್ ಕಮಾಂಡರ್ ಉನ್ನಿ ಕೆ ಪಿಳ್ಳೈ, ಚೀಫ್ ಟೆಸ್ಟ್ ಪೈಲೆಟ್ ಮತ್ತು ಗ್ರೂಪ್ ಕ್ಯಾಪ್ಟನ್ ರಾಜೇಶ್ ವರ್ಮಾ ಅವರ ಲಘು ಯುದ್ಧ ಹೆಲಿಕಾಫ್ಟರ್ನಲ್ಲಿದ್ದರು’ ಎಂದು ಎಚ್ಎಎಲ್ ಹೇಳಿದೆ.
ಸ್ವಯಂಚಾಲಿತ ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ಎಚ್ಎಎಲ್ ಅನುದಾನದೊಂದಿಗೆ ಅಭಿವೃದ್ಧಿಪಡಿಸಿದ್ದು, ವಿದೇಶಿ ವ್ಯವಸ್ಥೆಯನ್ನು ರಿಪ್ಲೇಸ್ ಮಾಡುವ ಸಾಮರ್ಥ್ಯ ಇದಕ್ಕಿದೆ.