ಮಧ್ಯಪ್ರದೇಶ: ಪುಣ್ಯ ನದಿಗಳು, ಧಾರ್ಮಿಕ ಸ್ಥಳಗಳು, ಶಾಲೆಗಳು, ಕಾಲೇಜುಗಳು ಮತ್ತು ಲೇಡೀಸ್ ಹಾಸ್ಟೆಲ್ಗಳ ಸುತ್ತಮುತ್ತಲ 50 ಮೀಟರ್ ವ್ಯಾಪ್ತಿವರೆಗಿನ ಪ್ರದೇಶವನ್ನು ಮಧ್ಯಪ್ರದೇಶ ’ಡ್ರೈ ಝೋನ್’ ಎಂದು ಘೋಷಿಸಿದ್ದು, ಇಲ್ಲಿ ಮದ್ಯಗಳನ್ನು ಮಾರಾಟ ಮಾಡುವುದು, ಕುಡಿಯುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಬುಧವಾರ ಮಧ್ಯಪ್ರದೇಶ 2018-19ರ ಸಾಲಿನ ಅಬಕಾರಿ ನಿಯಮವನ್ನು ಘೋಷಣೆ ಮಾಡಿದ್ದು, ಇದರಲ್ಲಿ ಈ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಿದೆ.
ಅಲ್ಲದೇ ದೇಶೀಯ ಮದ್ಯಗಳನ್ನು ಮಾರಾಟ ಮಾಡುತ್ತಿದ್ದ 149 ‘ಆಹಟ’ ಮದ್ಯದಂಗಡಿಗಳನ್ನೂ ಮುಚ್ಚಲಾಗಿದೆ. ಈ ಹಿಂದೆಯೇ ಎಪ್ರಿಲ್ ೧ರೊಳಗೆ ಎಲ್ಲಾ ಆಹಟಗಳನ್ನು ಮುಚ್ಚಬೇಕು ಎಂದು ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಘೋಷಣೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.