ಮುಂಬಯಿ: ಹುತಾತ್ಮ ಯೋಧರ ಕುಟುಂಬಿಕರಿಗೆ ನೀಡುವ ಪರಿಹಾರ ಧನವನ್ನು ಮಹಾರಾಷ್ಟ್ರ ಸರ್ಕಾರ ರೂ.20 ಲಕ್ಷದಿಂದ ರೂ.25 ಲಕ್ಷಕ್ಕೆ ಹೆಚ್ಚಳಗೊಳಿಸಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಬುಧವಾರ ಘೋಷಣೆ ಮಾಡಿದ್ದಾರೆ.
‘ಹಣದಿಂದ ಹುತಾತ್ಮರ ತ್ಯಾಗವನ್ನು ಅಳೆಯಲು ಸಾಧ್ಯವಿಲ್ಲ. ಮೊದಲು ಹುತಾತ್ಮರ ಕುಟುಂಬಿಕರು ರೂ.8.5 ಲಕ್ಷ ಪರಿಹಾರ ಪಡೆಯುತ್ತಿದ್ದರು. ನಂತರ ಅದನ್ನು ರೂ.20ಲಕ್ಷಕ್ಕೆ ಏರಿಸಲಾಗಿತ್ತು. ನಾವು ಈಗ ಅದನ್ನು ರೂ.25ಲಕ್ಷಕ್ಕೆ ಏರಿಕೆ ಮಾಡಿದ್ದೇವೆ’ ಎಂದು ಫಡ್ನವಿಸ್ ಹೇಳಿದ್ದಾರೆ.
‘ಎಲ್ಲರಿಗೂ ಗಡಿಗೆ ತೆರಳಿ ಹೋರಾಡುವ ಅವಕಾಶ ಸಿಗುವುದಿಲ್ಲ, ಆದರೆ ನಾವು ನಮ್ಮೊಳಗಿನ ಕೆಟ್ಟದರ ವಿರುದ್ಧ ಹೋರಾಡುವ. ಇದುವೇ ನಾವು ನಮ್ಮ ಯೋಧರಿಗೆ ಸಲ್ಲಿಸುವ ಗೌರವ’ ಎಂದಿದ್ದಾರೆ.