ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ವಿದೇಶಿ ನಿಯಮ ಹೆಚ್ಚು ಸಮರ್ಥ ಹಾಗೂ ಬಲಿಷ್ಠವಾಗುತ್ತಿದೆ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವು ಹೆಚ್ಚಿದೆ ಎಂದು ಚೀನಾ ಥಿಂಕ್ ಟ್ಯಾಂಕ್ ಹೇಳಿದೆ.
‘ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿತೆ ಹೆಚ್ಚು ವೈಬ್ರೆಂಟ್ ಹಾಗೂ ಸಾರ್ಥಕವಾಗಿದೆ. ಅಲ್ಲದೇ ಅದು ವಿಭಿನ್ನ ಹಾಗೂ ಅನನ್ಯ ‘ಮೋದಿ ಡಾಕ್ಟರಿನ್’ನನ್ನು ರಚಿಸಿಕೊಂಡಿದೆ. ಹೊಸ ಸನ್ನಿವೇಶದಲ್ಲಿ ಭಾರತವನ್ನು ಹೊಸ ಶಕ್ತಿಯಾಗಿ ಉದಯಿಸುವಂತೆ ಮಾಡುವ ತಂತ್ರಗಾರಿಕೆ ಇದಾಗಿದೆ’ ಎಂದು ಚೀನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನ ಉಪಾಧ್ಯಕ್ಷ ರಾಂಗ್ ಯಿಂಗ್ ಹೇಳಿದ್ದಾರೆ.
ಚೀನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನ ಜರ್ನಲ್ನಲ್ಲಿ ಬರೆದ ಲೇಖನದಲ್ಲಿ ಅವರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.