ನವದೆಹಲಿ: 2018ರ ಮೊದಲ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿನ ಮಹಿಳೆಯರು ಎಲ್ಲಾ ವಲಯದಲ್ಲೂ ಪ್ರಗತಿ ಕಾಣುತ್ತಿದ್ದಾರೆ ಎಂದರು.
ಪುರಾಣ ಗ್ರಂಥಗಳನ್ನು ಉಲ್ಲೇಖಿಸಿದ ಅವರು ಮಹಿಳೆಗೆ ಗೌರವಾರ್ಪಣೆ ಮಾಡುವುದು ನಮ್ಮ ಸಂಸ್ಕೃತಿ ಎಂದು ಪ್ರತಿಪಾದಿಸಿದರು.
ಫೆ.1ರಂದು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಪುಣ್ಯತಿಥಿಯ ಹಿನ್ನಲೆಯಲ್ಲಿ ಅವರನ್ನು ಸ್ಮರಿಸಿದ ಮೋದಿ, ಆಕೆ ಎಲ್ಲಾ ಭಾರತೀಯರಿಗೂ ಅದರಲ್ಲೂ ಯುವ ತುರುಣಿಯರಿಗೆ ಮೌಲ್ಯಭರಿತ ಸಂದೇಶವನ್ನು ನೀಡಿದ್ದಾಳೆ ಎಂದರು.
‘ಬಲಿಷ್ಠವಾಗಿದ್ದಾರೆ ಮಹಿಳೆಗೆ ಯಾವುದೂ ಅಸಾಧ್ಯವಲ್ಲ ಎಂಬ ಸಂದೇಶವನ್ನು ಆಕೆ ನೀಡಿದ್ದಾಳೆ’ ಎಂದರು.
‘ಒಬ್ಬ ಮಗಳು 10 ಪುತ್ರರಿಗೆ ಸಮಾನಳು. 10 ಪುತ್ರರಿಂದ ಸಿಗುವ ಪುಣ್ಯವನ್ನು ನಾವು ಒಬ್ಬ ಪುತ್ರಿಯಿಂದ ಪಡೆಯುತ್ತೇವೆ’ ಎಂದರು.
ವಾಯುಪಡೆಯ ಫೈಟರ್ ಪೈಲೆಟ್ಗಳಾದ ಭಾವನಾ ಕಾಂತ್, ಮೋಹನಾ ಸಿಂಗ್, ಅವನಿ ಚತುರ್ವೇದಿ ಅವರನ್ನು ಉಲ್ಲೇಖಿಸಿ ಅವರ ಸಾಧನೆಯನ್ನು ಕೊಂಡಾಡಿದರು. ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗ ಬಿಎಸ್ಎಫ್ ’ಸೀಮಾ ಭವಾನಿ’ಗಳ ಸಾಹಸವನ್ನು ಅವರು ಸ್ಮರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.