ಕೋಲ್ಕತ್ತಾ: ಕೇವಲ ಥಾಯ್ಲೆಂಡ್, ವೆನಿಸ್, ಕಾಶ್ಮೀರ ಅಥವಾ ವಿಯೆಟ್ನಾಂನಲ್ಲಿ ಮಾತ್ರ ಕಾಣಸಿಗುವ ತೇಲುವ ಮಾರುಕಟ್ಟೆಯನ್ನು ಇನ್ನು ಮುಂದೆ ಕೋಲ್ಕತ್ತಾದಲ್ಲೂ ನಾವು ಕಾಣಬಹುದಾಗಿದೆ. ಈಗಾಗಲೇ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ಪಟುಲಿಯಲ್ಲಿ ರಚನೆಗೊಂಡಿರುವ ತೇಲುವ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
500 ಮೀಟರ್ ಉದ್ದ ಮತ್ತು 60 ಮೀಟರ್ ಅಗಲದ ನೀರಿನ ಕೊಳದಲ್ಲಿ 114 ಬೋಟ್ಗಳನ್ನು ಹಾಕಿ ಕೋಲ್ಕತ್ತ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ ತೇಲುವ ಮಾರುಕಟ್ಟೆಯನ್ನು ನಿರ್ಮಿಸಿದೆ.
ಪ್ರವಾಸಿಗರನ್ನು ಈ ಮಾರುಕಟ್ಟೆ ಆಕರ್ಷಿಸಲಿದೆ, ವ್ಯಾಪಾರಿಗಳಿಗೂ ಗ್ರಾಹಕರನ್ನು ಆಕರ್ಷಿಸಲು ಇದೊಂದು ವಿನೂತನ ಪ್ರಯತ್ನವಾಗಲಿದೆ. ಹೂ ಹಣ್ಣು, ಹಂಪಲು, ತರಕಾರಿ ಎಲ್ಲಾ ದಿನಿಸುಗಳು ಇಲ್ಲಿ ಲಭ್ಯವಾಗಿದೆ.
ಕಾಶ್ಮೀರದಲ್ಲಿ ಈಗಾಗಲೇ ಮನಮೋಹಕ ಎನಿಸುವ ತೇಲುವ ಮಾರುಕಟ್ಟೆಯಿದೆ. ಆದರೆ ಕೋಲ್ಕತ್ತ ತೇಲುವ ಮಾರುಕಟ್ಟೆ ಹೊಂದಿದ ದೇಶದ ಮೊದಲ ಮೆಟ್ರೋಪಾಲಿಟನ್ ನಗರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.